ದಾವಣಗೆರೆ : ಒಡಲು ತುಂಬಿದ ತುಂಗಭದ್ರೆಗೆ ಚೇತನಾ ಸಾರಥ್ಯದ ಪ್ರೇರಣಾ ಸಾಂಸ್ಕೃತಿಕ ತಂಡ ಬಾಗಿನ ಅರ್ಪಿಸಿ ಧನ್ಯತಾ ಮನೋಭಾವ ಅರ್ಪಿಸಿತು.
ಎರಡು ವರ್ಷಗಳ ನಂತರ ನದಿ ತುಂಬಿ ಹರಿದಿದ್ದು, ಎರಡು ಜಲಾಶಯ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಗಂಗಾ ಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ನದಿ ತುಂಬಿ ಹರಿದಾಗ ಬಾಗಿನ ಅರ್ಪಿಸುವುದು ವಾಡಿಕೆ. ಆದರೆ ಬರಗಾಲ ಹಿನ್ನೆಲೆಯಲ್ಲಿ ಜಲಾಶಯ ಭರ್ತಿಯಾಗಿರಲಿಲ್ಲ. ಈ ವರ್ಷ ಸಂಪೂರ್ಣ ಭರ್ತಿಯಾದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿದರು. ಇವರಿಗೆ ಹರಿಹರ ಪೀಠದ ವಚನಾನಂದ ಶ್ರೀ ಸಾಥ್ ನೀಡಿದರು.
ಪ್ರೇರಣಾ ಸಂಸ್ಥೆಯ ಅಧ್ಯಕ್ಷೆ ಚೇತನಾ ಮಾತನಾಡಿ, ನದಿಗಳನ್ನು ತಾಯಿಯ ರೂಪದಲ್ಲಿ ಕಾಣುತ್ತೇವೆ. ಹೀಗಾಗಿ ಕೃತಜ್ಞತಾ ಭಾವದಿಂದ ಆಕೆಯನ್ನು ನಮಸ್ಕರಿಸಬೇಕು. ನದಿಗಳು ಮಾತೃ ಸ್ವರೂಪವಾಗಿರುವುದರಿಂದ ಬಾಗಿನ ಅರ್ಪಿಸಲಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಚನಾನಂದ ಸ್ವಾಮಿ ಜೀ, ದಾವಣಗೆರೆ ಜಿಲ್ಲೆಯ ವ್ಯವಸ್ಥಾಪಕ ಕೃಷ್ಣ, ಪ್ರೇರಣಾ ಸಂಸ್ಥೆಯ ಗಾಯತ್ರಿ, ಶಿಲ್ಪಾ ಮೃತ್ಯುಂಜಯ ಸುಶೀಲಮ್ಮ, ಕೀರ್ತಿ ಜನಾರ್ದನ್ ,ಪುಷ್ಪಲತಾ ಪಿ ಆರ್, ಚಂದನ ಸಂತೋಷ್, ನಿರ್ಮಲ ಮೇಡಂ, ಗೀತ ವೀ ರಾಯ್ಕರ್,ಭಾರತಿ, ಉಷಾರಾಣಿ, ಇವರೆಲ್ಲರ ಸಮ್ಮುಖದಲ್ಲಿ ಜೀವನದಿ ತಾಯಿ ತುಂಗಭದ್ರಗೆ ಬಾಗಿನ ಸಮರ್ಪಿಸಲಾಯಿತು 🙏