


ಶಿವಮೊಗ್ಗ; ಮಲೆನಾಡು ಶಿವಮೊಗ್ಗದಲ್ಲಿ ಗಣರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಿಸಲಾಯಿತು. ರಾಜ್ಯ ಮಲ್ನಾಡು ಪ್ರದೇಶ ಅಭಿವೃದ್ಧಿ ಮಂಡಳಿ, ಶಿವಮೊಗ್ಗ ಜಿಲ್ಲಾ ಸಹಕಾರ ಬ್ಯಾಂಕ್ ಆವರಣದಲ್ಲಿ
ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಮಂಡಳಿ ಅಧ್ಯಕ್ಷ ಹಿರಿಯ ಸಹಕಾರಿ ಡಾ.ಆರ್.ಆರ್ ಮಂಜುನಾಥ್ ಗೌಡ್ರು ನೆರವೇರಿಸಿದರು.
ಸಹ ಕಾರ್ಯದರ್ಶಿ ಹನುಮನಾಯಕ್, ಎಂಜಿನಿಯರ್ ವಿಜಯ್ ಭಾಗ್ಯರಾಜ್, ಸುರೇಶ್, ಕುರುವಳ್ಳಿ ನಾಗರಾಜ್ ಮತ್ತು ಸಿಬ್ಬಂದಿ ವರ್ಗದವರು ಜೊತೆಯಲ್ಲಿ ಇದ್ದರು. ಇನ್ನು ಶಿವಮೊಗ್ಗ ಜಿಲ್ಲಾ ಸಹಕಾರ ಬ್ಯಾಂಕ್ ಆವರಣದಲ್ಲಿ ಗಣರಾಜ್ಯೋತ್ಸವದ ನಿಮಿತ್ತ ಬ್ಯಾಂಕಿನ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಡಾ ಆರ್.ಎಂ ಮಂಜುನಾಥ್ ಗೌಡ ಶುಭಾಶಯಗಳು ಕೋರಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಸ್ ಕೆ ಮರಿಯಪ್ಪ, ಜಿಎಂನಾಗಭೂಷಣ್ ಸೇರಿದಂತೆ ಇತರೆ ಎಲ್ಲಾ ಸಿಬ್ಬಂದಿಗಳು ಉಪಸ್ಥಿತಿ ಇದ್ದರು.
