
ಶಿವಮೊಗ್ಗ: ಶಾರ್ಟ್ ಸರ್ಕೂ್ಯಟ್‌ನಿಂದ ಮನೆಯೊಂದು ಸಂಪೂರ್ಣ ಬೆಂಕಿಗಾಹುತಿಯಾಗಿರುವ ಘಟನೆ ಇಲ್ಯಾಜ್ ನಗರ 6ನೇ ತಿರುವಿನಲ್ಲಿ ನಡೆದಿದೆ. ಆಕಸ್ಮಿಕ ಬೆಂಕಿಗೆ ಸಂಪೂರ್ಣವಾಗಿ ಮನೆ ಮನೆಯ ವಸ್ತುಗಳು ಪೀಠೋಪಕರಣಗಳು ಭಸ್ಮವಾಗಿ ಲಕ್ಷಾಂತರ ರೂಪಾಯಿ ಮೌಲ್ಯ ನಷ್ಟ ಉಂಟಾಗಿದೆ. ಬೆಂಕಿಗಾಹುತಿಯಾದ ಮನೆ ಮುಸ್ಲಿಂ ಬೇಗ್ ಎಂಬುವರಿಗೆ ಸೇರಿದ್ದು, ಬಕ್ರೀದ್ ಹಬ್ಬಕ್ಕಾಗಿ ಅಣ್ಣನ ಮನೆಗೆ ಹೋದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಇವರು ಪೇಂಟರ್ ಕೆಲಸ ಮಾಡುತ್ತಿದ್ದು, ತಕ್ಷಣ ನೆರವಿನ ಅವಶ್ಯಕತೆ ಇದೆ. ಆದ್ದರಿಂದ ಸಂಬAಧಪಟ್ಟ ಇಲಾಖೆ ಮಹಾನಗರ ಪಾಲಿಕೆ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಬೇಕೆಂದು ಶಿವಮೊಗ್ಗ ಪೀಸ್ ಆರ್ಗನೈಸೇಷನ್ ಪ್ರಕಟಣೆ ಮೂಲಕ ಒತ್ತಾಯಿಸಿದೆ.