ಶಿವಮೊಗ್ಗ
: ಕಾಂಗ್ರೆಸ್ನವರು ಬಿಜೆಪಿ ಸರ್ಕಾರದ ಮೇಲೆ 40% ಆರೋಪ ಹೊರಿಸಿದ್ದು, ಶುದ್ಧ ಸುಳ್ಳಾಗಿದ್ದು, ಆಧಾರ ರಹಿತ ಎಂದು ಶನಿವಾರ ಲೋಕಾಯುಕ್ತ ವರದಿಯಲ್ಲಿ ತಿಳಿಸಲಾಗಿದೆ ಎಂದು ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಅಂಬಿಕಾಪತಿ ಆರೋಪ ನಿರಾಧರ ಎಂದು ಲೋಕಾಯುಕ್ತ ವರದಿಯಲ್ಲಿ ತಿಳಿಸಲಾಗಿದೆ. ಈ ಗುತ್ತಿಗೆದಾರರ ತಂಡ ಕಾಂಗ್ರೆಸ್ನ ಏಜೆಂಟ್ಗಳೆಂದು ಈಗ ಸಾಭೀತಾಗಿದೆ. ಸುಳ್ಳು ಹೇಳಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಈಗ ಜಗಜ್ಜಾಹಿರಾಗಿದ್ದು, ಲೋಕಾಯುಕ್ತರ ವರದಿ ಕೈ ಸೇರಿದ ಮೇಲೆ ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಈಗ ಹೊಸದಾಗಿ ಪಿಪಿಇ ಕಿಟ್ ಮತ್ತು ವೆಂಟಿಲೇಟರ್ ಖರೀದಿ ಯಲ್ಲಿ ಭ್ರಷ್ಟಚಾರ ಆಗಿದೆ ಎಂದು ಆರೋಪ ಹೊರಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಶೂನ್ಯ ವೈಪಲ್ಯವನ್ನು ಡೈವರ್ಟ್ ಮಾಡಲು ಆರೋಪ ಹೊರಿಸುತ್ತಿದ್ದು, ಕರೋನ ಸಂದರ್ಭದಲ್ಲಿ ಇಡೀ ಪ್ರಪಂಚದಲ್ಲಿ ಭೀಕರ ಸಮಸ್ಯೆಗಳಿತ್ತು. ವೆಂಟಿಲೇಟರ್ ಮತ್ತು ಪಿಪಿಇ ಕಿಟ್ಗಳು ಸಿಗುತ್ತಿರಲಿಲ್ಲ. ಚೀನಾ ದೇಶದಿಂದ ಆಮದು ಮಾಡಿಕೊಳ್ಳಲಾಗಿತ್ತು. ಅಂದಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈ ಖರೀದಿಗಳ ಮೇಲೆ 4ಜಿ ವಿನಾಯಿತಿ ಕೂಡ ನೀಡಿತ್ತು ಎಂದರು.
ಈಗ ಬಿಜೆಪಿ ಪಕ್ಷದ ವತಿಯಿಂದ ಮೂರು ತಂಡಗಳಾಗಿ. ಮೂಡಾ ಮತ್ತು ವಕ್ಫ್ ಹಗರಣದ ಬಗ್ಗೆ ರಾಜ್ಯಾದಾದ್ಯಂತ ಜನ ಜಾಗೃತಿ ಹೋರಾಟ ನಡೆಸಲಿದೆ. ಗುತ್ತಿಗೆದಾರರಿಗೆ 22-23ನೇ ಸಾಲಿನ ಬಿಲ್ಲುಗಳು ಇನ್ನೂ ಪಾವತಿಯಾಗಿಲ್ಲ, ಅವರ ಮೇಲೆ ಕಮಿಷನ್ಗಾಗಿ ಒತ್ತಡ ಹೇರಲಾಗುತ್ತಿದೆ ಎಂದರು.
ಬಿಜೆಪಿಯಲ್ಲಿ ಯಾವುದೇ ಬಂಡಾಯವಿಲ್ಲ, ಕೆಲವು ಹಿರಿಯ ನಾಯಕರು ಪ್ರತೇಕವಾಗಿ ಹೋರಾಟ ನಡೆಸಲು ಮುಂದಾಗಿದ್ದು ನಿಜ. ಆದರೆ ಹಿರಿಯ ನಾಯಕರು ಅವರ ಮನವೋಲಿಸಿ ಎಲ್ಲವನ್ನು ಸರಿಪಡಿಸುತ್ತಾರೆ ಎಂದರು