
ದಾವಣಗೆರೆ : ಮೂರು ಗಾಲಿ ಆಟೋ ನಂಬಿದ್ದ ದಾವಣಗೆರೆಯ ಈ ಆಟೋ ಚಾಲಕನ ಬದುಕು ಬೀದಿಗೆ ಬಿದ್ದಿದೆ. ಹದಿನೈದು ವರ್ಷದ ಹಳೆಯ ಗಾಡಿ ಎಂದು ಆರ್ ಟಿಒ ಅಧಿಕಾರಿಗಳು ಅಟೋವನ್ನು ಎಳೆತಂದು ಬರೋಬ್ಬರಿ 13 ಸಾವಿರ ರೂ ದಂಡ ವಿಧಿಸಿದ್ದಾರೆ.
ದಂಡ ಕಟ್ಟಲಾಗದೇ ಈ ಚಾಲಕ ನಗರದ ಆರ್ ಟಿ ಓ ಕಚೇರಿ ಎದುರು ತನ್ನ ದುಃಖವನ್ನು ಪಬ್ಲಿಕ್ ನೆಕ್ಸ್ಟ್ ನೊಂದಿಗೆ ಹಂಚಿಕೊಂಡಿದ್ದಾನೆ.
ಈ ಆಟೋ ನನಗೆ ಜೀವನಕ್ಕೆ ಆಧಾರವಾಗಿತ್ತು. ನಾನು ತರಗಾರ ಕೆಲಸ ಮಾಡುತ್ತಿದ್ದೇನೆ..ನಾನು ಬಡವ..ಈ ಊರನ್ನು ಯಾಕಾದ್ರೂ ಸ್ಮಾರ್ಟ್ ಸಿಟಿ ಮಾಡಿದ್ರು, ದೊಡ್ಡವರೂ ಮಾತ್ರ ಇಲ್ಲಿ ಬದುಕ ಬಹುದು..ನಮ್ಮಂತವರು ಹೇಗೆ ಬದುಕಲು ಸಾಧ್ಯ. ನನ್ಮಗ ಪೋಪ್ಪಾ ಆಟೋ ತಂದಿಲ್ವ…ನಾನು ಊಟ ಮಾಡಬೇಕು ಆಟೋ ತಗೊಂಡು ಬಾ ಅಂತಾನೆ..ಆದರೆ ಆರ್ ಟಿ ಒ ಅಧಿಕಾರಿಗಳು 13 ಸಾವಿರ ದಂಡ ಹಾಕಿದ್ದಾರೆ…ಆಟೋ ಇಲ್ಲದೇ ನಾನು ಏನು ಮಾಡಲಿ ನೀವೇ ಹೇಳಿ…ನನ್ನಂತೆ ನೂರಾರು ಜನರದ್ದು ಇದೇ ಕಥೆ.ಬಡವರು ಬದುಕುವ ಹಾಗಿಲ್ವ ಎಂದು ಪ್ರಶ್ನಿಸುತ್ತಿದ್ದಾರೆ.


ಇನ್ನು ವಾಯುಮಾಲಿನ್ಯ ಉಂಟು ಮಾಡುತ್ತಿದ್ದರಿಂದ ಜಿಲ್ಲೆಯಲ್ಲಿ 15 ವರ್ಷ ಮೀರಿದ ಆಟೋರಿಕ್ಷಾಗಳ ಸಂಚಾರ ನಿಷೇಧಿಸಲು ಪ್ರಾದೇಶಿಕ ಸಾರಿಗೆ ಇಲಾಖೆ ಮುಂದಾಗಿದೆ. ದಾವಣಗೆರೆಯಲ್ಲಿ ಇದೇ ಮೊದಲ ಬಾರಿಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಪ್ರಸ್ತುತ 15 ವರ್ಷ ಮೀರಿದ 2,600ಕ್ಕೂ ಹೆಚ್ಚು ಆಟೋಗಳು ರಸ್ತೆ ಮೇಲೆ ಸಂಚರಿಸುತ್ತಿವೆ. ಇದರಿಂದಾಗಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಅಂಶವನ್ನು ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಹಾಗಾಗಿ,ಈ ಹಳೇ ಆಟೋಗಳನ್ನು ಸಂಪೂರ್ಣ ನಿಷೇಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.
ದಾವಣಗೆರೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ(ಆರ್‌ಟಿಒ) ಆದೇಶದ ಪ್ರಕಾರ, 15 ವರ್ಷ ಅವಧಿ ಮೀರಿದ ಆಟೋಗಳು ನಗರ ವ್ಯಾಪ್ತಿಯಲ್ಲಿ ಓಡಾಡುವಂತಿಲ್ಲ. ಇದರ ಬದಲು ಹಳೆ ಆಟೋಗಳನ್ನು ಗುಜರಿಗೆ ಹಾಕಿ ಹೊಸ ಆಟೋ ಖರೀದಿಸಬೇಕು ಎನ್ನುವ ಕಾರಣದಿಂದ ಹಳೇ ಆಟೋಗಳನ್ನು ಸಂಪೂರ್ಣ ಬ್ಯಾನ್ ಮಾಡಲು ಆರ್‌ಟಿಒ ನಿರ್ಧಾರ ಕೈಗೊಂಡಿದೆ.
ಜಿಲ್ಲೆಯಲ್ಲಿ ಒಟ್ಟು ಎಂಟು ಸಾವಿರ ಅಧಿಕ ಆಟೋಗಳಿವೆ. ಈ ಪೈಕಿ ಅಂದಾಜು ಐದು ಸಾವಿರ ಆಟೋಗಳು ಪರವಾನಗಿ ಪಡೆದಿವೆ. ಉಳಿದ ಅಧಿಕ ಆಟೋಗಳು ಪರ್ಮಿಟ್ ಇಲ್ಲದೆ ಸಂಚರಿಸುತ್ತಿವೆ. ನಗರದಲ್ಲಿ ಸಂಚರಿಸುತ್ತಿರುವ ಆಟೋಗಳ ಪೈಕಿ, ಬೇರೆ ಜಿಲ್ಲೆಗಳಲ್ಲಿ ನೋಂದಣಿ ಆಗಿರುವ ಆಟೋಗಳೇ ಹೆಚ್ಚಿವೆ.
ನಗರದಲ್ಲಿ ಸಂಚರಿಸುತ್ತಿರುವ ಆಟೋಗಳ ಪೈಕಿ 1,000ಕ್ಕೂ ಹೆಚ್ಚು ಆಟೋಗಳ ಮಾಲೀಕರು ಪರ್ಮಿಟ್ ಪಡೆಯುವ ಗೋಜಿಗೂ ಹೋಗುತ್ತಿಲ್ಲ. ಈ ನಿಟ್ಟಿನಲ್ಲಿಇಂದಿಗೂ ಪರವಾನಗಿ ಕೋರಿ ಅರ್ಜಿ ಸಲ್ಲಿಸಿಲ್ಲ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.
ಹೊಸ ಮೋಟಾರು ವಾಹನ ಕಾಯಿದೆ ಪ್ರಕಾರ ಪರ್ಮಿಟ್ ಇಲ್ಲದೆ ವಾಹನ ಚಲಾಯಿಸಿದರೆ ರೂ.
13000 ದಂಡ ವಿಧಿಸಬಹುದಾಗಿದೆ. ಸದ್ಯಕ್ಕೆ ದಾವಣಗೆರೆಯಲ್ಲಿ ನೋಂದಣಿಯಾದ ವಾಹನಗಳ ಪರ್ಮಿಟ್ ಪರಿಶೀಲಿಸಿ ದಂಡ ವಿಧಿಸಲಾಗುತ್ತಿದೆ. ಇದಾದ ಬಳಿಕ ಹೊರ ಜಿಲ್ಲೆಗಳ ವಾಹನಗಳ ಪರ್ಮಿಟ್‌ಗಳನ್ನು ಸಹ ಪರಿಶೀಲನೆಗೆ ಒಳಪಡಿಸಲಾಗುವುದು. ಒಂದುವೇಳೆ, ನಿಯಮ ಉಲ್ಲಂಘನೆ ಆಗಿರುವುದು ಗಮನಕ್ಕೆ ಬಂದರೆ ದಂಡ ವಿಧಿಸಲಾಗುವುದು ಎಂಬ ಅಭಿಪ್ರಾಯ ಆರ್ ಟಿ ಒ ಅಧಿಕಾರಿಗಳದ್ದು. ಏನೇ ಆಗಲಿ ಸರಕಾರದ ನೀತಿ ನಿಯಮಗಳು ಬಡವನ ಪಾಲಿಗೆ ಮುಳ್ಳಾಗಿದೆ.
…