
ಶಿವಮೊಗ್ಗ: ಅಕ್ರಮ ಗಾಂಜಾ ಮಾರಾಟ ಪ್ರಕರಣ ಸಂಬAಧ ನಾಲ್ವರು ಆರೋಪಿಗಳಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ೧೦ ವರ್ಷ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ ಶನಿವಾರ ಆದೇಶಿಸಿದೆ. ಇಂದಿರಾ ನಗರದ ನಿವಾಸಿಗಳಾದ ದೌಲತ್ ಗುಂಡು, ಮುಜೀಬ್, ಕಡೇಕಲ್ ನಿವಾಸಿಗಳಾದ ಶೋಯೆಬ್, ಮಹಮ್ಮದ್ ಜಫ್ರುಲ್ಲಾ ಅವರು ಶಿಕ್ಷೆಗೆ ಗುರಿಯಾದವರು.
ಅಪರಾಧಿಗಳು ಗಾಂಜಾವನ್ನು ಇನೊವಾ ಕಾರಿನಲ್ಲಿ ಆಂಧ್ರಪ್ರದೇಶದಿAದ ಶಿವಮೊಗ್ಗದ ಕಡೆಗೆ ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯ ಪಿಎಸ್ಐ ದೀಪಕ್ ಎಂ.ಎಸ್. ನೇತೃತ್ವದ ತಂಡ ೨೦೨೧ರಲ್ಲಿ ಲಕ್ಕಿನಕೊಪ್ಪ ಕ್ರಾಸ್ ಬಳಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿತ್ತು.
೬.೫೦ ಲಕ್ಷ ಮೌಲ್ಯದ ೨೧ ಕೆ.ಜಿ. ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ್ದ ಕಾರ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ತನಿಖಾಧಿಕಾರಿಯಾಗಿದ್ದ ತುಂಗಾನಗರ ಠಾಣೆ ಪಿಎಸ್ಐ ಭಾರತಿ ಬಿ.ಎಚ್. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ??ಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಕಾರಣ ಅಪರಾಧಿಗಳಿಗೆ ನ್ಯಾಯಾಧೀಶ ಮಂಜುನಾಥ ನಾಯಕ್ ೧೦ ವರ್ಷ ಕಠಿಣ ಶಿಕ್ಷೆ ಮತ್ತು ತಲಾ ? ೧.೦೫ ಲಕ್ಷ ದಂಡ ವಿಧಿಸಿ, ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ ೧ ವರ್ಷ ಸಾಧಾ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಸುರೇಶ್ ಕುಮಾರ್ ಎ.ಎಂ. ವಾದ ಮಂಡಿಸಿದ್ದರು.

